ಶ್ವೇತಾ ಚೆಂಗಪ್ಪ ಕಿರುತೆರೆಯ ಅಭಿನೇತ್ರಿ, ನಿರೂಪಕಿ. ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅರುಂಧತಿ ಧಾರಾವಾಹಿ, ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ, ತಂಗಿಗಾಗಿ ಚಲನಚಿತ್ರಗಳ ಮೂಲಕ ನಾಡಿನ ಮನೆಮಾತಾಗಿದ್ದಾರೆ. ಮೌಂಟ್ ಕಾರ್ಮೆಲ್ ಕಾಲೇಜಲ್ಲಿ ಓದಿರುವ ಶ್ವೇತಾ ಹತ್ತನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಸೇರಿದ್ದರು. == ವೈಯಕ್ತಿಕ ಜೀವನ == ಶ್ವೇತಾರವರ ತಂದೆಯವರ ಹೆಸರು ಚೆಂಗಪ್ಪ, ಕೊಡಗು ಜಿಲ್ಲೆಯ, 'ಸೋಮವಾರಪೇಟೆ' ಯ ಬಳಿಯ ಗ್ರಾಮದವರು. ತಾಯಿಯವರ ಹೆಸರು ತಾರಾ. ಶ್ವೇತಾ ಹಾಗೂ ಅವರ ತಮ್ಮ ಸಾಗರ್, ಬೆಂಗಳೂರಿನಲ್ಲೇ ಹುಟ್ಟಿದವರು. ಬೆಂಗಳೂರಿನಲ್ಲಿ ತಂದೆಯವರ ಉದ್ದಿಮೆಯಿದೆ. ಶ್ವೇತಾ ಚೆಂಗಪ್ಪ 'ಬಿಕಾಂ,' ಓದುತ್ತಲೇ ಅಭಿನಯದಲ್ಲೂ ಪಾಲ್ಗೊಂಡು ಬೆಳೆದರು. ಕಿರುತೆರೆ ಪಾದಾರ್ಪಣೆ ಕಾಲೇಜ್‍ನಲ್ಲಿ ಓದುವ ಸಮಯದಲ್ಲೇ ಅವಕಾಶಗಳು ಬರುತ್ತಿತ್ತು. ಸುಮತಿ ಧಾರಾವಾಹಿಯಲ್ಲಿನ ಆಡಿಶನ್ ಮೂಲಕ ಆಯ್ಕೆಯಾದರು. ಇಲ್ಲಿಯವರೆಗೆ ಶ್ವೇತಾ ಅವರು ಎಲ್ಲ ಧಾರಾವಾಹಿಗಳಲ್ಲೂ 'ಟೈಟಲ್ ರೋಲ್' ನಲ್ಲಿ ಅಭಿನಯಿಸಿದ್ದಾರೆ. == ದೂರದರ್ಶನ == ಧಾರಾವಾಹಿ ಅರುಂಧತಿ ಧಾರಾವಾಹಿಯು ಪುನರ್ಜನ್ಮ ಜನ್ಮದ ನೆನಪನ್ನು ತರಿಸುವ ವಿಭಿನ್ನವಾದ ಕಥಾವಸ್ತುವನ್ನು ಹೊಂದಿತ್ತು. ಹಿಂದಿನ ಜನ್ಮದ ಅರುಂಧತಿ, ಈ ಜನ್ಮದ ನಂದಿನಿ / ಅರುಂಧತಿ ಹಾಗೂ ದೇವರು, ೩ ತರಹದ ಪಾತ್ರಾಭಿನಯ. ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದರು. 'ಅರುಂಧತಿ' ಧಾರಾವಾಹಿಯಲ್ಲಿ ಶ್ವೇತಾ ಅರುಂಧತಿ-ನಂದಿನಿ ದ್ವಿಪಾತ್ರದಲ್ಲಿ ಅಮೋಘವಾಗಿ ನಟಿಸಿ ವೀಕ್ಷಕರ ಮನಸೆಳೆದಿದ್ದಾರೆ. ಸುಮಾರು 2010ರಲ್ಲಿ ಆರಂಭಗೊಂಡ ಈ ಧಾರಾವಾಹಿಯು ಮೂರನೆಯ ವರ್ಷಕ್ಕೆ ಕಾಲಿಟ್ಟು ಮುನ್ನಡೆಯುತ್ತಲಿದೆ. ಸುಮತಿ ಧಾರಾವಾಹಿ ೫೦೦ ಕಂತುಗಳ ಪ್ರಸಾರವಾಗಿದೆ. ಕಾದಂಬರಿ ೬ ವರ್ಷ ನಡೆಯಿತು. ಸುಕನ್ಯ ಒಂದು ಸಾವಿರ ಸಂಚಿಕೆ ದಾಟಿದೆ. ರಿಯಾಲಿಟಿ ಶೋ == ಸಿನಿಮಾಗಳು == == ಉಲ್ಲೇಖಗಳು ==